Skip to main content

Posts

ತಾಳ್ಮೆಯೇ ಸದ್ಗುಣ

ನಿಮ್ಮ ನಿರೀಕ್ಷಿತ ಸಮಯದಲ್ಲಿ ಕೆಲಸಗಳು ನಡೆಯದ ಕಾರಣ ಮುಂದುವರೆಯುವುದು ಬೇಡ ಎಂದು   ನೀವು ಯೋಚಿಸಿದೀರಾ ? ನಿಮ್ಮ ಕೆಲಸದಲ್ಲಿ ಬೆಳವಣಿಗೆಯನ್ನು ಕಾಣದ ಕಾರಣ ನೀವು ಏನು ಮಾಡುತ್ತಿದ್ದೀರಿ ಅದನ್ನು ಕೈಬಿಡಲು   ನಿರ್ಧರಿಸಿದೀರಾ ? ನಿಮ್ಮ ಕೆಲಸದಲ್ಲಿ ಅನುಭವಿಸಿದ ವೈಫಲ್ಯಗಳಿಂದಾಗಿ ನೀವು ಎಂದಾದರೂ ಆ ಕೆಲಸವನ್ನು   ಕೊನೆಗೊಳಿಸಬೇಕೆಂದು ತೀರ್ಮಾನಿಸಿದೀರಾ ? ಜೀವನದಲ್ಲಿ ಅನಿವಾರ್ಯವಾಗಿ ಕಂಡ ಏರಿಳಿತದ ಕಾರಣದಿಂದಾಗಿ ನೀವು ದುಃಖದಿಂದ , ಖಿನ್ನತೆಯಿಂದ ಮತ್ತು ನಕಾರಾತ್ಮಕ ಭಾವನೆಗಳಿಂದ ಮುಳುಗಿದಾಗ , ಮಾಡುತ್ತಿರುವ ಕೆಲಸವನ್ನು ಅರ್ಧದಲ್ಲಿ ಬಿಡಬೇಕೆಂದು ನೀವು ಭಾವಿಸಿದಾಗ , ಜೀವನವನ್ನು ಮುಂದುವರಿಸಲು ಒಂದು ಕಾರಣವನ್ನು ನೋಡಲು ನಿಮಗೆ ಸಾಧ್ಯವಾಗದಿದ್ದಾಗ , ನಿಮನ್ನು ನೀವು ಸರಳವಾದ ಮತ್ತು ಆಳವಾದ ಒಂದು ಸಾದೃಶ್ಯವೆಂದು ಭಾವಿಸಿಕೊಳ್ಳಿ. ಅದಕ್ಕಾಗಿ ಈ ಸಣ್ಣ ಅನುಭವವನ್ನು ಓದಿ: ಒಬ್ಬ ವ್ಯಕ್ತಿ ತನ್ನ ಹೊಲದಲ್ಲಿ ಜರೀಗಿಡ ಮತ್ತು ಬಿದಿರಿನ ಬೀಜಗಳನ್ನು ಬಿತ್ತಿದನು ಮತ್ತು ಅವುಗಳಿಗೆ   ಸಾಕಷ್ಟು ಬೆಳಕು ಮತ್ತು ನೀರು ಸಿಗುವಂತೆ ನೋಡಿಕೊಂಡರು.   ಜರೀಗಿಡವು ಭೂಮಿಯಿಂದ ಬೇಗನೆ ಮೊಳಕೆಯೊಡೆದು ಹೊರಹೊಮ್ಮಿ ಅದರ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಬಣ್ಣದಿಂದ ಆವರಿಸುವುದನ್ನು ನೋಡಿ ಅವನು ಸಂತೋಷಪಟ್ಟನು , ಆದರೆ ಬಿದಿರಿನ ನೋಟದಿಂದ ಏನೂ ಹೊರಬರದನ್ನು ನೋಡಿದಾಗ ಅವನು ನಿರಾಶೆಗೊಂಡನು , ಆದರೆ ...

ಮೌನ : ಏಕಾಂತದ ಸಂಗಾತಿ :

ಮೌನ : ಏಕಾಂತದ ಸಂಗಾತಿ : ಹೆಣ್ ಹೆಸರ ರೂಪ ಧರಿಸಿ.. ನಿನಾದದ ಗೋಡೆ ಮರೆಗೆ ಅವಿತವಳು.. ಮಾತುಗಳು ಉಸಿರೆಳೆದಾಗ.. ಭಾವುಕತೆಗೆ ಮಾತಾದವಳು... ನನ್ನ ಉಸಿರಾದವಳು; ಮೌನ..!! ಕ್ಷಮಿಸಲಾಗದ ತಪ್ಪು ಮಾಡಿದ ನನಗೆ.. ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು.. ಭಾವನೆಗಳ ಕಾಲುವೆಯಲ್ಲಿ  ಅವಿತಿದ್ದಾಗ.. ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು.. ನನ್ನ ಉಸಿರಾದವಳು; ಮೌನ..!! ಮಾತು ಬಾರದ ಮುಗುಳ್ನಗೆಯೊಂದಿಗೆ.. ನಗುಮುಖವ ಧಾರೆಯೆರೆದು ಬೆಂಬಲಿಸಿದವಳು.. ನಡುರಾತ್ರಿ ಕಣ್ಣ ಬೆವರಲ್ಲಿ  ನಡುಗುತಿದ್ದಾಗ.. ತನ್ನ ಹಸ್ತ ನೀಡಿ ಸ್ವಾಗತಿಸಿದವಳು.. ನನ್ನ ಉಸಿರಾದವಳು; ಮೌನ..!! ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು, ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು, ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು ನನ್ನ ಉಸಿರಾದವಳು; ಮೌನ! ಕವಿದ ಕಲ್ಪನೆಗೆ ಹಣತೆಯಾಗಿ ಒಲವಿನ ಪುಟದ ಮರೆಗೆ ಕವಿತೆಯಾದವಳು ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು ನನ್ನ ಉಸಿರಾದವಳು; ಮೌನ! ಸೋಕದ ಮುತ್ತಿನ ಬಿಸಿಗೆ ಕರಗಿ ವಾಲದ ತೋಳಿನ ನಡುವೆ ಬಂದಿಯಾದವಳು ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು ನನ್ನ ಉಸಿರಾದವಳು; ಮೌನ!       ...

ಆತ್ಮ ಸ್ತಯ್ರ್ಯ ..

ದಯವಿಟ್ಟು ಅವಳಿಗೆ ಅಂಗವಿಕಲೆ ಪಟ್ಟ ಕಟ್ಟಬೇಡಿ ಅವಳಿಗೆ; ನೀನು ಸಬಲಳು ಎಂದು ಒಮ್ಮೆ ಹೇಳಿನೋಡಿ, ದಯವಿಟ್ಟು ಅವಳನ್ನು ಶೋಷಿಸುವ ಹಾಗೆ ನೋಡಬೇಡಿ ಅವಳನ್ನು ಯಾವತ್ತು ಹೀಯಾಳಿಸಬೇಡಿ. ನೀವು ಭಾವಿಸಬಹುದು, ಅವಳಿಗೆ ಬೇಕು ಸಹಾನುಭೂತಿ ಆದರೆ; ಅವಳಿಗೆ ಬೇಕಾಗಿರುವುದು ಬರಿ ಅನುಭೂತಿ, ನೋಡಿ ಅವಳನ್ನು ಅದೇ ಪೂರ್ಣ ಘನತೆಯಿಂದ ಅದೇ ಮಾನವೀಯತೆಯ ದೃಷ್ಟಿಯಿಂದ. ಯಾವಾಗಲೂ ಅವಳಿಗೆ ಒಂದು ಅವಕಾಶ ನೀಡಿ ಅವಳು ಶಕ್ತಳಲ್ಲ ಎಂದು ಯೋಚಿಸುವುದನ್ನು ಬಿಡಿ, ಅವಳಿಗೆ ಅದನ್ನು ಸ್ವಂತವಾಗಿ ಮಾಡಬಹುದಾದರೆ ಒಬ್ಬಳೇ ಮಾಡಲಿ ಬಿಡಿ, ನಿಮಗೇನು ತೊಂದರೆ. ನೀವು ಭೇಟಿಮಾಡುವಾಗ ಆಕೆಯನ್ನು; ಅಂತರಇರಿಸಬೇಡಿ ಆಕೆಯ ಅಂಗವಿಕಲತೆಯನ್ನು ಬಿಡಿ; ಆಕೆಗೆ ಪ್ರಾಮುಖ್ಯತೆ ಕೊಡಿ. ನಾವು ನೋಡದ ಒಂದು ಆತ್ಮ ಅವಳಲ್ಲಿ ಇದೆ, ಅವಳನ್ನು ಇತರ ಮಾನವರಂತೆ ನೋಡಿ! - AliEn!

ಅಪರಿಚಿತೆ...!

ಅಪರಿಚಿತೆ...! ನಿನ್ನ ಕಣ್ಣ ಕಣ್ಮರೆಯಲ್ಲಿ ಕರಗಿ ನೀರಾಗುವ ಆಸೆಯೊಂದಿಗೆ, ಹಾತೊರೆಯುತಿದೆ ನನ್ನ ಕನಸುಗಳು ... ಕಣ್ಣ ಜೋಡಿ ಮಿಟುಕಿಸುವ ಮುನ್ನವೇ, ಕಣ್ಣ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು, ನಿನ್ನ ನೆನೆದು.. ನೆನಪಾದವು, ನೀ ನನ್ನ ಸಂತೈಸಿದ ಆ ಏಕಾಂತದ  ದಿನಗಳು, ಮುಗುಳ್ನಕ್ಕು; ಮೋಡ ಕರಗಿತು ಕಣ್ಣಂಚಿನಲ್ಲಿ... ಎಲ್ಲಿರುವೆ; ನನ್ನ ಹೃದಯದ ವೀಣೆಯ ತಂತಿಯ ಮೀಟಿದ, ಅಪರಿಚಿತೆ.. ಕಣ್ಣ ಮುಂದೆ ಬಂದು; ನನ್ನ ಕಣ್ಣ ಮಳೆಗೆ, ಕೊಡೆ ಹಿಡಿಯಲಾರೆಯ..? - AliEn!

ಪ್ರಶ್ನಾರ್ಥಕ ಚಿಹ್ನೆ??

ಇನ್ನೇನು ಉಳಿದಿಲ್ಲ ಪಶ್ಚಾತಪಿಸಲು ಮಾತು ಮುರಿಯದ ನಿನ್ನ ಮೌನ ಅರ್ಥ ಇಲ್ಲದ ನನ್ನ ಕವನ ನಿನ್ನ ಪರವೇ ವಾದ ಮಂಡಿಸಿದ ಮೇಲೂ. ನಿನ್ನ ಕಿರುಬೆರಳ ಮೀಟಲು ಹೃದಯ ಉರಿದಿತ್ತು ನಿನ್ನ ಕಣ್ಣ ತೀಕ್ಷ್ಣತೆಯೊಂದಿಗೆ ಈಗ ಸೇದಿದ ಸಿಗರೇಟು ತುಟಿ ಸುಟ್ಟದ್ದೂ ಅರಿವಿಲ್ಲ ಎನಗೆ. ನಾವು ಮಾತನಾಡಿದ ಸ್ವರವೆಲ್ಲ ಕೇಳಿತು, ಅವಳೆಲ್ಲಿ ಅಂತಾ.. ಉತ್ತರಕ್ಕೂ ಇಲ್ಲಿ ಪ್ರಶ್ನಾರ್ಥಕ ಚಿಹ್ನೆ , ಕಣ್ಣೀರಿನ ಸಮುದ್ರಕ್ಕೆ ಅಣೆಕಟ್ಟೇಕೆ ..? ನೀ ಕೈಕೊಟ್ಟಾಗ ಅತ್ತದ್ದು , ನಿನ್ನ ತುಟಿಯ ಮೇಲಿನ ನನ್ನ ನೂರು ಮುತ್ತು ಮಾತ್ರ...!                                                      - AliEn!

ಅಕಸ್ಮಾತಾಗಿಯೇ ಸಿಗುವ...!

ಅಕಸ್ಮಾತಾಗಿಯೇ   ಸಿಗುವ ...! ಮಸುಕು       ಮಾಡಿ       ಮರೆಯದಾದೆನು    ಇಂದು ವಿಳಂಬ    ಮಾಡದೇ  ನೀ    ವಿರಳವಾಗಿ  ಬಂದು ನನ್ನ      ಕಂಗಳ     ಕಬ್ಬಿಣದ      ಒಂದೊಂದು      ನೋಟದಲ್ಲು   ದರದರನೇ      ಎಳೆಯಿತಲ್ಲ    ನಿನ್ನ      ಮೂಗುತಿ      ಕಾಂತಕಲ್ಲು ...! ನೆಪವೊಡ್ಡಿ    ಬಂದೆನಲ್ಲ    ನೀನೇನೆ    ಇರುವೆಡೆ   ನಿನ್ನಂತೆಯೇ  ಕಂಡೆನಲ್ಲ  ಇನ್ನಾರನೋ    ಹಲವೆಡೆ ನಿನ್ನೆಸರ  ಕೇಳಲಾರೆ  ಗೊತ್ತು  ಬಿಡು ನನಗೊಂದು    ಅಡ್ಡಹೆಸರಾ  ಕೊಟ್ಟುಬಿಡು ...! ಈ    ಮುಗ್ಧ  ಮನಸು  ಯಾಕೋ    ಜಾರಿದ    ಅಂದಿದೆ   ಹೇಳದೇನೆ    ಪ್ರೇಮ    ಕಾಯಿದೆ    ಜಾರಿಗೆ    ಬಂದಿದೆ ಪಕ್ಕ    ಇದ್ದಾಗ    ಬೇಡ ,   ದೂರ    ಹೋಗಿಯೇ   ಕಾಣಿಸು ಮೊಗವ   ತಾರೀಖು    ಕಾಯ...

ತಲೆ ಕೆಡಿಸುವ ಪ್ರಯತ್ನ ..!!

ತಲೆ ಕೆಡಿಸುವ ಪ್ರಯತ್ನ ..!! ನಿನ್ನ ಕಂಗಳು , ಹುಣ್ಣಿಮೆಯ ಬೆಳದಿಂಗಳು ಮುದ್ದು ಮುದಾಗಿ ಮಿಟುಕಿಸುವ ನಿನ್ನ ಆ ರೆಪ್ಪೆಗಳು ವರ್ಣಿಸಲು ನಿನ್ನ ನನಗಿಂದು ಸಿಗುತ್ತಿಲ್ಲ ಪದಗಳು ಆದರೂ,  ಪ್ರಯತ್ನಿಸುವೆ... ಆ ಬೀಸುವ ತಂಗಾಳಿ ಕೆಣಕಿತು ನಿನ್ನ ಮುಂಗುರುಳ ಅದ ಸರಿಸಿ ನೀ ಕದ್ದೆ ನನ್ ಎದೆಯ ಪಾರಿವಾಳ ನೀನೆ ಬೇಕೆಂದು ಹೇಳುತಿದೆ ನನ್ ಅಂತರಾಳ ನಿರಾಕರಿಸಿ ಶೊನ್ಯ ಮಾಡಬೇಡ ನನ್ನ ಬಾಳ! ಆದರೂ,  ಪ್ರಯತ್ನಿಸುವೆ... ಮಿಂಚನಂತಿರುವ ನಿನ್ನ ಕಣ್ಣ ತೀಕ್ಷ್ಣತೆ ಮುಗಿಯಿತಿಂದು ನಿನ್ನ ಮುಂದೆ ನಿಂತ ನನ್ನ ಕತೆ ನೀ ಸಿಗುವೆಯೋ ಇಲ್ಲವೋ, ಅದು ನನ್ನ ವ್ಯಥೆ ಸಿಗುವವರೆಗೂ ಪ್ರಯತ್ನಿಸುವೆ ಇಟ್ಟು ನನ್ನ ಪ್ರಾಣವ ಒತ್ತೆ! - AliEn!