ಮೌನ : ಏಕಾಂತದ ಸಂಗಾತಿ :
ಹೆಣ್ ಹೆಸರ ರೂಪ ಧರಿಸಿ..
ನಿನಾದದ ಗೋಡೆ ಮರೆಗೆ ಅವಿತವಳು..
ಮಾತುಗಳು ಉಸಿರೆಳೆದಾಗ..
ಭಾವುಕತೆಗೆ ಮಾತಾದವಳು...
ನನ್ನ ಉಸಿರಾದವಳು; ಮೌನ..!!
ಕ್ಷಮಿಸಲಾಗದ ತಪ್ಪು ಮಾಡಿದ ನನಗೆ..
ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು..
ಭಾವನೆಗಳ ಕಾಲುವೆಯಲ್ಲಿ ಅವಿತಿದ್ದಾಗ..
ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು..
ನನ್ನ ಉಸಿರಾದವಳು; ಮೌನ..!!
ಮಾತು ಬಾರದ ಮುಗುಳ್ನಗೆಯೊಂದಿಗೆ..
ನಗುಮುಖವ ಧಾರೆಯೆರೆದು ಬೆಂಬಲಿಸಿದವಳು..
ನಡುರಾತ್ರಿ ಕಣ್ಣ ಬೆವರಲ್ಲಿ ನಡುಗುತಿದ್ದಾಗ..
ತನ್ನ ಹಸ್ತ ನೀಡಿ ಸ್ವಾಗತಿಸಿದವಳು..
ನನ್ನ ಉಸಿರಾದವಳು; ಮೌನ..!!
ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು,
ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು,
ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ
ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು
ನನ್ನ ಉಸಿರಾದವಳು; ಮೌನ!
ಕವಿದ ಕಲ್ಪನೆಗೆ ಹಣತೆಯಾಗಿ
ಒಲವಿನ ಪುಟದ ಮರೆಗೆ ಕವಿತೆಯಾದವಳು
ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ
ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು
ನನ್ನ ಉಸಿರಾದವಳು; ಮೌನ!
ಸೋಕದ ಮುತ್ತಿನ ಬಿಸಿಗೆ ಕರಗಿ
ವಾಲದ ತೋಳಿನ ನಡುವೆ ಬಂದಿಯಾದವಳು
ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ
ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು
ನನ್ನ ಉಸಿರಾದವಳು; ಮೌನ!
- AliEn -
ಹೆಣ್ ಹೆಸರ ರೂಪ ಧರಿಸಿ..
ನಿನಾದದ ಗೋಡೆ ಮರೆಗೆ ಅವಿತವಳು..
ಮಾತುಗಳು ಉಸಿರೆಳೆದಾಗ..
ಭಾವುಕತೆಗೆ ಮಾತಾದವಳು...
ನನ್ನ ಉಸಿರಾದವಳು; ಮೌನ..!!
ಕ್ಷಮಿಸಲಾಗದ ತಪ್ಪು ಮಾಡಿದ ನನಗೆ..
ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು..
ಭಾವನೆಗಳ ಕಾಲುವೆಯಲ್ಲಿ ಅವಿತಿದ್ದಾಗ..
ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು..
ನನ್ನ ಉಸಿರಾದವಳು; ಮೌನ..!!
ಮಾತು ಬಾರದ ಮುಗುಳ್ನಗೆಯೊಂದಿಗೆ..
ನಗುಮುಖವ ಧಾರೆಯೆರೆದು ಬೆಂಬಲಿಸಿದವಳು..
ನಡುರಾತ್ರಿ ಕಣ್ಣ ಬೆವರಲ್ಲಿ ನಡುಗುತಿದ್ದಾಗ..
ತನ್ನ ಹಸ್ತ ನೀಡಿ ಸ್ವಾಗತಿಸಿದವಳು..
ನನ್ನ ಉಸಿರಾದವಳು; ಮೌನ..!!
ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು,
ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು,
ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ
ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು
ನನ್ನ ಉಸಿರಾದವಳು; ಮೌನ!
ಕವಿದ ಕಲ್ಪನೆಗೆ ಹಣತೆಯಾಗಿ
ಒಲವಿನ ಪುಟದ ಮರೆಗೆ ಕವಿತೆಯಾದವಳು
ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ
ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು
ನನ್ನ ಉಸಿರಾದವಳು; ಮೌನ!
ಸೋಕದ ಮುತ್ತಿನ ಬಿಸಿಗೆ ಕರಗಿ
ವಾಲದ ತೋಳಿನ ನಡುವೆ ಬಂದಿಯಾದವಳು
ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ
ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು
ನನ್ನ ಉಸಿರಾದವಳು; ಮೌನ!
- AliEn -
Super Soms as always
ReplyDeleteಹೇ ಅಜ್ಞಾತ ಕವಿಯೇ ಮೌನ ಮುರಿದು ಹೇಳು ಯಾರು ನೀನು
ReplyDelete