ಅಕಸ್ಮಾತಾಗಿಯೇ ಸಿಗುವ...!
ಮಸುಕು ಮಾಡಿ ಮರೆಯದಾದೆನು ಇಂದು
ವಿಳಂಬ ಮಾಡದೇ ನೀ ವಿರಳವಾಗಿ ಬಂದು
ನನ್ನ ಕಂಗಳ ಕಬ್ಬಿಣದ ಒಂದೊಂದು ನೋಟದಲ್ಲು
ದರದರನೇ ಎಳೆಯಿತಲ್ಲ ನಿನ್ನ ಮೂಗುತಿ ಕಾಂತಕಲ್ಲು...!
ನೆಪವೊಡ್ಡಿ ಬಂದೆನಲ್ಲ ನೀನೇನೆ ಇರುವೆಡೆ
ನಿನ್ನಂತೆಯೇ ಕಂಡೆನಲ್ಲ ಇನ್ನಾರನೋ ಹಲವೆಡೆ
ನಿನ್ನೆಸರ ಕೇಳಲಾರೆ ಗೊತ್ತು ಬಿಡು
ನನಗೊಂದು ಅಡ್ಡಹೆಸರಾ ಕೊಟ್ಟುಬಿಡು...!
ಈ ಮುಗ್ಧ ಮನಸು ಯಾಕೋ ಜಾರಿದ ಅಂದಿದೆ
ಹೇಳದೇನೆ ಪ್ರೇಮ ಕಾಯಿದೆ ಜಾರಿಗೆ ಬಂದಿದೆ
ಪಕ್ಕ ಇದ್ದಾಗ ಬೇಡ, ದೂರ ಹೋಗಿಯೇ ಕಾಣಿಸು ಮೊಗವ
ತಾರೀಖು ಕಾಯ್ದಿರಿಸುವ ಬದಲು, ಆಗಾಗ ಅಕಸ್ಮಾತಾಗಿಯೇ ಸಿಗುವ...!!
-AliEn!
👌👌
ReplyDeleteThank you
DeleteGood one...👌
ReplyDeleteThank you
DeleteSuper bro
ReplyDeleteThank you
DeleteSuper, macha.. 👌👌👌
ReplyDeleteThank you!
DeleteSuperb some👌
ReplyDeleteThank you!
DeleteSuper dude
ReplyDeleteThank you!
DeleteVery nice 👌
ReplyDeleteThank you!
Delete