ನೀ ನಾಚಿ ಇನೊಮ್ಮೆ ನಕ್ಕು ಬಿಡಬೇಡ ನನ್ನ ನೋಡಿ, ನಿನ್ನ ನಾಚಿಕೆ ನೋಡಿ ನಾ ನಿನ್ನ ಪ್ರೀತಿಯಲ್ಲಿ ಮರುಳಾಗಿಬಿಡುವೆ, ಮತೊಮ್ಮೆ ಹೇಳಿ ಬಿಡುವೆಯಾ ನಿನ್ನ ಮನದಾಳದ ರಾಗವ ಹಾಡಿ, ನಾ ಇನೊಮ್ಮೆ ನಿನ್ನ ರಾಗಕ್ಕೆ ನನ್ನ ರಾಗ ಸೇರಿಸಿ ಈ ಜಗಕ್ಕೆ ಹೇಳಿ ಕೂಗಿ ಬಿಡುವೆ, ಪುಟ ಹೃದಯ ಇದು ಹುಚ್ಚು ಕನಸು ಕಂಡಿದೆ ಎಂದು, ಆ ಹುಚ್ಚ ಕನಸಲ್ಲಿ ನಿನ್ನನ್ನೇ ತುಂಬಿರುವೆ ಇಂದು, ಒಮ್ಮೆ ಕೂಗಿ ಹೇಳಿ ಬಿಡು ಆ ಕನಸಿನ ರಾಣಿ ನೀ ಆಗುವೆಯಾ, ನಿನ್ನ ನನ್ನ ಹೃದಯದಲ್ಲಿ ಪಟ್ಟಾಭಿಷೇಕ ಮಾಡಲು ಕಾದಿರುವೆಯಾ, ಒಮ್ಮೆ ನೀ ಈ ಸಿಂಹಾಸನ ಏರಿ ಹೃದಯದ ಒಡತಿ ಆಗಿಬಿಡು, ಸದಾ ಕಾಲ ನಿನ್ನ ಸೇನಾಧಿಪತಿಯಾಗಿ ನಿನ್ನನ್ನು ಕಾಯಲು ಅನುಮತಿ ಕೊಡು..!
ಹಗಲು ಇರುಳೆನ್ನದೆ ಕಾಡಿದೆಯನ್ನ ಕಿರುನಗೆ ಬೀರುತ ಮೋಹಿಸಿದೆಯನ್ನ ಕನಸ, ನನಸಾಗಿಸಿ ಆಲಂಗಿಸಿದೆಯನ್ನ ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!! ಎಂದು ಬರುವೆ...? ಈ ಕನಸ ಹೂವಾಗಿಸಿ,ನಲ್ಮೆಯ ರಸದೌತಣ ಉಣಬಡಿಸಲು ಕಾದಿರುವೆ ನಾನಿನ್ನ, ತುಂಬಿದ ಹೃದಯದಲ್ಲಿ ಭಾಂದವ್ಯದ ಭಾವ ತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!! ಅನುರಾಗದ ಅರಮನೆಯಲ್ಲಿ ಕಾದಿರುವೆ ನಿನಗಾಗಿ ಎದೆ ಕದವ ತೆರೆದು, ಈ ಜಗದ ದೊಂಬಿಯ ಮರೆತು ಹೃದಯ ತಾಳ ತಪ್ಪುತಿರುವುದು, ಮುತ್ತಿನ ಮಳೆ ಸುರಿಸುತ್ತ, ನಮ್ಮ ಪಾಲಿಗೆ ಇದು ಸ್ವರ್ಗವಾಗಿರುವುದು..!! ಅಂತರಂಗದಿ ಪುಟಿದೇಳುತಿದೆ ನಿನ್ನಯ ಚೆಲುವು ತುಂಬಿದ ಕಂಗಳ ನೆನೆದು, ಬಯಕೆ ಮೂಡಿಹುದು ಮನಸು ನಿನ್ನ ಸೇರಲು ಹಪಹಪಿಸುತ್ತಿರುವುದು, ನಿನ್ನ ಕಾಣುವ ಹಂಬಲದಿ ಕನಸುಗಳ ಹೆಣೆಯುತಿಹುದು..!! ಮನಕ್ಕೆ ಬೇಕಿಹುದು ನಿನ್ನ ತೋಳಬಲದ ಅಪ್ಪುಗೆ, ಕಳೆದು ಹೋಗುವೆ ಪ್ರೀತಿಯ ಬೇಡುತ ನಿನ್ನೊಪ್ಪಿಗೆ, ಎದೆಗೊರಗಿ ನಾನು ನಿದ್ರಿಸುವೆ ಮಗುವಾಗಿ, ಅಪ್ಪಿ ಮುದ್ದಿಸುವೆಯಾ ನೀ ಬೆಳದಿಂಗಳ ಚಂದಿರನಾಗಿ..!! "ಕಾಡಬೇಡ ಗೆಳತಿ ನೀನಿನ್ನೂ ದೂರ ನಿಂತು ಕಾಡಿಸಿದ್ದು ಸಾಕಿನ್ನೂ "