ನೀ ನಾಚಿ ಇನೊಮ್ಮೆ ನಕ್ಕು ಬಿಡಬೇಡ ನನ್ನ ನೋಡಿ,
ನಿನ್ನ ನಾಚಿಕೆ ನೋಡಿ ನಾ ನಿನ್ನ ಪ್ರೀತಿಯಲ್ಲಿ ಮರುಳಾಗಿಬಿಡುವೆ,
ಮತೊಮ್ಮೆ ಹೇಳಿ ಬಿಡುವೆಯಾ ನಿನ್ನ ಮನದಾಳದ ರಾಗವ ಹಾಡಿ,
ನಾ ಇನೊಮ್ಮೆ ನಿನ್ನ ರಾಗಕ್ಕೆ ನನ್ನ ರಾಗ ಸೇರಿಸಿ ಈ ಜಗಕ್ಕೆ ಹೇಳಿ ಕೂಗಿ ಬಿಡುವೆ,
ಪುಟ ಹೃದಯ ಇದು ಹುಚ್ಚು ಕನಸು ಕಂಡಿದೆ ಎಂದು,
ಆ ಹುಚ್ಚ ಕನಸಲ್ಲಿ ನಿನ್ನನ್ನೇ ತುಂಬಿರುವೆ ಇಂದು,
ಒಮ್ಮೆ ಕೂಗಿ ಹೇಳಿ ಬಿಡು ಆ ಕನಸಿನ ರಾಣಿ ನೀ ಆಗುವೆಯಾ,
ನಿನ್ನ ನನ್ನ ಹೃದಯದಲ್ಲಿ ಪಟ್ಟಾಭಿಷೇಕ ಮಾಡಲು ಕಾದಿರುವೆಯಾ,
ಒಮ್ಮೆ ನೀ ಈ ಸಿಂಹಾಸನ ಏರಿ ಹೃದಯದ ಒಡತಿ ಆಗಿಬಿಡು,
ಸದಾ ಕಾಲ ನಿನ್ನ ಸೇನಾಧಿಪತಿಯಾಗಿ ನಿನ್ನನ್ನು ಕಾಯಲು ಅನುಮತಿ ಕೊಡು..!
Comments
Post a Comment