Skip to main content

ಆದರ್ಶ ಶಿಕ್ಷಕ

ಆದರ್ಶ ಶಿಕ್ಷಕ :

"ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ.
ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು.
ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ...,
ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6  ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ್ದಾರಿ ಗುರುವಿನದೇ ಆಗಿರುತ್ತದೆ " ಇಂದಿನ ಮಕ್ಕಳೇ ನಾಳಿನ ಪ್ರಜೆಗಳು " ಎಂಬ ನಾಣ್ಣುಡಿಯಂತೆ ದೇಶದ ಭವಿಷ್ಯವನ್ನು ಕಟ್ಟುವ ಕೆಲಸವನ್ನು ಶಿಕ್ಷಕರೇ ಮಾಡಬೇಕು. ದೇಶದ ಬೆನ್ನೆಲುಬು ರೈತ ಹೇಗೋ ಹಾಗೆಯೇ ಶಿಕ್ಷಕ ಕೂಡ ದೇಶದ ಬೆನ್ನೆಲುಬೇ..., ಪ್ರತಿಯೊಬ್ಬನನ್ನು ತಿದ್ದುವ ಅಧಿಕಾರ ಮತ್ತು ಧೈರ್ಯವಿರುವ ಆ ಶಿಕ್ಷಕನೂ ಕೂಡ ಆದರ್ಶವಾಗಿರಬೇಕಲ್ಲವೇ?? ಅವನಲ್ಲಿಯೂ ಕೆಲವು ಆದರ್ಶ ಗುಣಗಳಿರಬೇಕಲ್ಲವೇ?
ಹೌದು, ಖಂಡಿತವಾಗಿಯೂ ಆತನು ಒಬ್ಬ ಒಳ್ಳೆಯ ಶಿಕ್ಷಕನಾಗುವುದರ ಜೊತೆಗೆ ಆದರ್ಶ ಶಿಕ್ಷಕನೂ ಆಗಿರಬೇಕು. ಆತನ ಪ್ರತಿ ಕ್ಷಣದ ನಡೆ ನುಡಿಯೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಕೇವಲ ಸರ್ಕಾರ/ಸಂಸ್ಥೆಯ ಶಿಕ್ಷಕನಾಗಿ ನೇಮಿಸಿದ್ದಾರೆ, ಸಂಬಳ ಕೊಡುತ್ತಾರೆ ಅಥವಾ ತನ್ನ ಜೀವನ ಸಾಗಿಸಲು ಪಾಠ ಮಾಡುತ್ತಾನೆ, ಕಲಿತರೂ ಬಿಟ್ಟರು ನನಗೇನು ನಷ್ಟವಿಲ್ಲ ಎನ್ನುವವ ಎಂದಿಗೂ ಗುರುವಿನ ಸ್ಥಾನದಲ್ಲಿ ನಿಲ್ಲಲು ಅರ್ಹನಲ್ಲ.
ಆದರ್ಶ ಶಿಕ್ಷಕನೆಂದರೆ; ವಿದ್ಯಾರ್ಥಿಗಳಿಗೆ ಎಲ್ಲವನ್ನು ಕಲಿಸುವವನಾಗಿರಬೇಕು, ಮಕ್ಕಳಿಗೆ ಕೇವಲ ಪುಸ್ತಕದಲ್ಲಿ ಇರುವ ಜ್ಞಾನವಲ್ಲದೆ ಸಮಾಜದ ನಿಜವಾದ ಅರಿವು ಮೂಡಿಸುವವನಾಗಿರಬೇಕು, ವಿದ್ಯಾರ್ಥಿಗೆ ಪ್ರೇರಣೆಯಾಗುವ, ಸ್ಫೂರ್ತಿ ತುಂಬಿಸುವ ತಾಕತ್ತು ಆತನಲ್ಲಿರಬೇಕು, ಮಕ್ಕಳ ಮೇಲೆ ಆತನ ವ್ಯಕ್ತಿತ್ವ, ಮಾತು, ನಡೆ - ನುಡಿ ತುಂಬಾನೇ ಪರಿಣಾಮ ಬೀರುತ್ತದೆ.
ಎಷ್ಟರ ಮಟ್ಟಿಗೆ ಅಂದರೆ, ಈ ವರ್ಷದ ರಜಾ ದಿನಗಳಲ್ಲಿ, ನನ್ನ ಸ್ನೇಹಿತರ ಜೊತೆಗೆ ನಾನೇ ಕಲಿತ ಶಾಲೆಯಲ್ಲಿ ಹವ್ಯಾಸಕ್ಕಾಗಿ ಪಾಠ ಮಾಡುವ ನಿರ್ಧಾರಕ್ಕೆ ಬಂದೆವು. ನಾವು ಆಯ್ಕೆ ಮಾಡಿಕೊಂಡ ವಿಷಯ ಜೀವನ ಮೌಲ್ಯಗಳು. ಅದು ಒಂದು ಸಣ್ಣ ಪ್ರಾರ್ಥಮಿಕ ಶಾಲೆ, ನಾನು ಮತ್ತು ನನ್ನ ಒಬ್ಬಳು ಸ್ನೇಹಿತೆ, ಆರು ಮಾತು ಏಳನೇ ತರಗತಿಗೆ ಹೋಗಿದ್ದೇವು, ಸುಮಾರು ಒಂದು ವರೆ ಗಂಟೆಯ ಕಾಲಾವಕಾಶ ನಮಗೆ, ಹೀಗೆ ಹೇಳಿಕೊಡುತ್ತಿದ್ದ ಸಮಯದಲ್ಲಿ ಒಬ್ಬ ಹುಡುಗ ಎದ್ದು ನಿಂತು,
" ಸರ್.. ಸರ್.. ಇವ್ನು ನನಗೆ ಹೊಡಿತಾ ಇದ್ದಾನೆ" ಎಂದ
ನಾನು, " ಯಾಕಪ್ಪ , ಯಾಕೆ ಹೊಡ್ದೆ " ಎಂದು ಕೇಳಿದಕ್ಕೆ ಇನೊಬ್ಬ
" ಸರ್ .. ಅವ್ನು ನನ್ನಗೆ ಕೆಟ್ಟದಾಗಿ ಬೈದ , ಅದಕ್ಕೆ ಹೊಡೆದೆ , ಎಂದ
" ನೋಡಿ ನೀವು ಹೀಗೆಲ್ಲ ಜಗಳ ಮಾಡಬಾರದು, ಈ ರೀತಿ ಕೆಟ್ಟ ಮಾತಲ್ಲಿ ಬಯ್ಯಬಾರದು, ಬಯ್ಯುವುದರಿಂದ ನಮಗೆ ಏನು ಸಿಗಲ್ಲ, ಬದಲಾಗಿ ಯಾವಾಗಲೂ ಒಳ್ಳೆಯದೇ ಮಾತನಾಡಿದರೆ ನಿಮ್ಮ ಸ್ನೇಹಿತರು ಕೂಡ  ನಿಮ್ಮನ್ನು ಹಾಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿಸುತ್ತಾರೆ" ಎಂದೆ ಮತ್ತು ಪಾಠವನ್ನು ಮುಂದುವರಿಸಿದೆ. ಒಂದು ಅರ್ಧ ಘಂಟೆ ಆಗಿರಬೇಕು ಅನಿಸುತ್ತದೆ , ನನ್ನ ಗೆಳತಿಗೆ " ಲೇ ಮಂಗಾ , ಆ ಬುಕ್ಸ್ ಸರಿಯಾಗಿ ಜೋಡಿಸು " ಎಂದೆ ಎಲ್ಲಾ ಮಕ್ಕಳ ಮುಂದೆಯೇ, ತಕ್ಷಣಕ್ಕೆ ಒಬ್ಬ ಹುಡುಗ ಎದ್ದು ನಿಂತು " ಸರ್ .. ನಮಗೆ ಬಯ್ಯ ಬಾರದು ಅಂತ ಹೇಳಿ ನೀವು ಮಾತ್ರ ಬಯ್ಯುತ್ತಿದ್ದೀರಾ " ಅಂದ. ನನಗೆ ನಿಜವಾಗಿಯೂ ನಾಚಿಕೆಯಾಯಿತು.
ಹೀಗೆ ಶಿಕ್ಷಕರನ್ನು ಪ್ರತಿ ಕ್ಷಣದಲ್ಲಿಯೂ ಗಮನಿಸುವ , ಅನುಕರಿಸುವ ಮಕ್ಕಳ ಮುಂದೆ ಪ್ರೇರಣಾದಾಯಕವಾಗಿರುವುದು ಆದರ್ಶ ಶಿಕ್ಷಕನ ಆದ್ಯ ಕರ್ತವ್ಯ. ತಾಳ್ಮೆ , ಕರುಣೆ, ಸಹನೆ , ತಾರತಮ್ಯ ಇಲ್ಲದ ಗುಣ ಆದರ್ಶ ಶಿಕ್ಷಕನಲ್ಲಿರಬೇಕು. ಕಲಿಸುವ, ಕೆಲಸ ಮಾಡುವ ಆತನೂ ವಿದ್ಯಾರ್ಥಿಗಳ ಜೊತೆ ಕಲಿಯುವ ಗುಣ ಮತ್ತು ತಾನು ಕೂಡ ಒಬ್ಬ ನಿರಂತರ ವಿದ್ಯಾರ್ಥಿಯಾಗಿರಬೇಕು. ತನ್ನ ಕೆಲಸದ ಮೇಲೆ ಆತನಿಗಿರುವ ಶ್ರದ್ಧೆ ಮತ್ತು ಪ್ರೀತಿ ಆತನನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯುತ್ತದೆ.
ಒಂದು ಕಾಲೇಜಿಗೆ ಒಂದೇ ಸಮಯದಲ್ಲಿ ಬಂದ ಇಬ್ಬರು ಶಿಕ್ಷಕರು , ಅಂದರೆ ಅವರಿಬ್ಬರ ವಯಸ್ಸು, ವಿದ್ಯಾಭ್ಯಾಸ, ರೂಪ, ವಿಷಯ ಎಲ್ಲವು ಕೂಡ ಒಂದೇ , ಆದರೆ ಒಬ್ಬ ಶಿಕ್ಷಕ ಆದರ್ಶ ಶಿಕ್ಷಕನೆನಿಸುತ್ತಾನೆ ಮತ್ತೊಬನ ಪಾತ್ರ ತುಂಬಾ ಕಡಿಮೆ ಇರುತ್ತದೆ, ಕಣ್ಣಾರೆ ಕಂಡು ಅನುಭವಕ್ಕೆ ಬಂದದ್ದು, ಕಾರಣ ಇಷ್ಟೇ , ಆದರ್ಶ ಶಿಕ್ಷಕನೆನಿಸಿದವ ವಿದ್ಯಾರ್ಥಿಗಳ ಜೊತೆ ಸ್ನೇಹಯುತವಾದ, ನಂಬಿಕೆಯುತವಾದ ಸಂಭಂದವನ್ನು ಬೆಳೆಸಿಕೊಳ್ಳುತ್ತಾನೆ . ತಾನು ವೃತ್ತಿಗೆ ಹೊಸಬ ಎಂದು ಕಲಿಯುವುದರ ಜೊತೆಗೆ ಕಲಿಸುವ ಮನೋಭಾವ ಹೊಂದಿರುತ್ತಾನೆ. ಕೇವಲ ಪಠ್ಯ ಮುಗಿಸುವ ಗುರಿ ಇರಿಸಿಕೊಳ್ಳದೆ ವಿದ್ಯಾರ್ಥಿಗಳಿಗೆ ಅರ್ಥೈಸುವ ಕೆಲಸ ಮಾಡುತ್ತಾನೆ.
ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕ ಶಿಸ್ತಿನ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ದಾರಿಯಾಗಬೇಕು. ತಂದೆ ತಾಯಿ , ಸ್ನೇಹಿತರು ಅಥವಾ ಬಂಧುಬಳಗದವರು ಒಬ್ಬ ವ್ಯಕ್ತಿ ಹೊಟ್ಟೆ ಹಸಿವು ಎಂದಾಗ ಊಟ ಕೊಡುವುದಾದರೆ , ಅದೇ ಒಬ್ಬ ಆದರ್ಶ ಶಿಕ್ಷಕನಾದವನು ಅದನ್ನು ಸಂಪಾದಿಸುವ ಮಾರ್ಗ ತೋರಿಸಬೇಕು.
"A great  teacher  is someone who  teaches  not only with mind but  also  with heart " ಎನ್ನುವ ಮಾತಿನಂತೆ , ತನ್ನ ಕೆಲಸದ ಮೇಲೆ ಶ್ರದ್ಧೆ , ಪ್ರೀತಿ ಇದ್ದು ಮಕ್ಕಳ ಜೊತೆ ಮಕ್ಕಳಾಗಿ ತಾನು ಕಲಿಯುವ ವಿನಮ್ರತೆ ಇರುವವ , ಅವನು ನಿಜವಾದ ಆದರ್ಶ ಶಿಕ್ಷಕ.
ಆದರೆ ಎಲ್ಲದಕ್ಕಿಂತಲೂ ಬದುಕು ದೊಡ್ಡದು , ಜೀವನಕ್ಕಿಂತ ದೊಡ್ಡವನಾದ ಆದರ್ಶ ಶಿಕ್ಷಕನಿಲ್ಲ.
"ಪ್ರತಿಯೊಬ್ಬರೊಳಗೊಂದು ಪದ ಕಲಿತು ಸರ್ವಜ್ಞನಾಗುವುದೇ" ಶಿಕ್ಷಣ. ಅವನೇ ಆದರ್ಶ ಶಿಕ್ಷಕ.

- AliEn!
- Amrutha!

Comments

  1. Thank you for the opportunity somanna avre!!!

    ReplyDelete
  2. ಸುಂದರವಾದ ಪ್ರಬಂಧ ಸರ್ 👌

    ReplyDelete

Post a Comment

Popular posts from this blog

Kannada Poem

ಮುಗ್ದತೆಯ ‌‌‌‌ಮಂಪರು ಗೊಂಬೆ..!! ಲೇ ಹುಡುಗಿ,  ನಾನಿಂದು ನಿನ್ನ ಪ್ರೆಮ ಪೀಡಿತ ನನ್ನವಳಂತು ನೀ ಖಂಡಿತ ನನಗರಿವಿಲ್ಲ ಏನಿದ್ದಕ್ಕೆ ಪ್ರೇರೇಪಿತ ನೀನಿಲ್ಲದೆ ನಿಲ್ಲುತ್ತೆ ನನ್ನ ಎದೆಬಡಿತ..! ನನ್ನನೇಕೆ ಕಾಡಿಸುತೀಯ ಓ ಹೆಣ್ಣೇ ಮರೆಯಲಾರೆ ಕಣ್ಣಲ್ಲಿ ನೀ ಕೊಟ್ಟ ಸನ್ನೆ ನಿನ್ನಾ ಜೋಡಿಸಿರುವ ಹಲ್ಲುಗಳು ದಾಳಿಂಬೆ ಹಣ್ಣೇ ನೀನಿರದೆ ಬದುಕಲಾರೆ ಭೂಮಿ ತಾಯಾಣೇ...! ಮನದಲಿರುವುದನ್ನು ಹೇಳುವಾಸೆ ಚೆಲುವೆ ನನಗಿಂತ ಮೊದಲು ನೀನೇ ಹೇಳು ನನ್ನೋಲವೆ ಕಣ್ಣ ನೋಟದಲ್ಲೇ ನೀ ನನ್ನ ಸೆಳೆವೆ ನೆದ್ದೆಯಲ್ಲೊ ನಾ ನಿನ್ನೆಸರೇ ಕನವರಿಸುವೆ...! ನೀನೊಂದು ಮುಗ್ದತೆಯ ‌‌‌‌ಮಂಪರು ಗೊಂಬೆ ನನ್ನ ಮನದಾಸೆಯ ಉರ್ವಷಿ, ಮೇನಕೆ, ರಂಬೆ ಓ ಹುಡುಗಿ, ನೀನಿರದೆ ನಾನಾಗುವೇ ಬಾಡಿದ ಮರದ ಕೊಂಬೆ..!                                  -AliEn!     

ನನ್ನೊಳಗಿನ ಕವಿತೆ..!

ಹೇ ಹುಡುಗಿ, ನನ್ನೊಳಗಿನ ಕವಿತೆ ನೀನು .... ನಿನಗಾಗಿ ರಾತ್ರಿಯಿಡಿ ಬರೆದೆ ನಾನು ..!!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ನನ್ನೇಕೆ ನೀನು ಮರೆತೆ.. ಬೇರೆಲ್ಲಿ ಈ ಹೃದಯ ಸೇರುತ್ತೆ...! ಕವಿತೆಯ ಪ್ರತಿ ಪುಟದಲ್ಲೂ ನಿನ್ನ ಪ್ರತಿಬಿಂದವೇ ... ಒಡೆದಿರೋ ಗಾಜಲೂ ನಾ ನಿನ್ನನೇ ಕಾಣುವೇ.. ನಿನ್ನಯ ನೆನಪಲಿ ಈ ಮಳೆಯಲು ಬೆವರುವೇ... ಆ ಬೆವರಿನ ಹನಿಯಲು ನಿನ್ನ ಮುಖವಾಡವೇ...!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ಕಣ್ಣಿನ ಅಂಚಲಿ ನಾ ನಿನ್ನನೇ ನೆನೆಯುವೇ... ನೆನಪಿನ ಪುಟದಲಿ ಬರೆಯ ಏಕಾಂತವೇ... ಏಕಾಂತದ ಪ್ರತಿ ಕ್ಷಣದಲ್ಲೂ ನಿನ್ನನೇ ಬಯಸುವೇ ... ಆ ಬಯಕೆಯ ಕನಸಲು ನಿನ್ನೆ ಕನವರಿಸುವೇ ... ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ ..     -AliEn!