ಇನ್ನೇನು ಉಳಿದಿಲ್ಲ ಪಶ್ಚಾತಪಿಸಲು ಮಾತು ಮುರಿಯದ ನಿನ್ನ ಮೌನ ಅರ್ಥ ಇಲ್ಲದ ನನ್ನ ಕವನ ನಿನ್ನ ಪರವೇ ವಾದ ಮಂಡಿಸಿದ ಮೇಲೂ. ನಿನ್ನ ಕಿರುಬೆರಳ ಮೀಟಲು ಹೃದಯ ಉರಿದಿತ್ತು ನಿನ್ನ ಕಣ್ಣ ತೀಕ್ಷ್ಣತೆಯೊಂದಿಗೆ ಈಗ ಸೇದಿದ ಸಿಗರೇಟು ತುಟಿ ಸುಟ್ಟದ್ದೂ ಅರಿವಿಲ್ಲ ಎನಗೆ. ನಾವು ಮಾತನಾಡಿದ ಸ್ವರವೆಲ್ಲ ಕೇಳಿತು, ಅವಳೆಲ್ಲಿ ಅಂತಾ.. ಉತ್ತರಕ್ಕೂ ಇಲ್ಲಿ ಪ್ರಶ್ನಾರ್ಥಕ ಚಿಹ್ನೆ , ಕಣ್ಣೀರಿನ ಸಮುದ್ರಕ್ಕೆ ಅಣೆಕಟ್ಟೇಕೆ ..? ನೀ ಕೈಕೊಟ್ಟಾಗ ಅತ್ತದ್ದು , ನಿನ್ನ ತುಟಿಯ ಮೇಲಿನ ನನ್ನ ನೂರು ಮುತ್ತು ಮಾತ್ರ...! - AliEn!