Skip to main content

ನನ್ನೊಳಗಿನ ಕವಿತೆ..!

ಹೇ ಹುಡುಗಿ, ನನ್ನೊಳಗಿನ ಕವಿತೆ ನೀನು ....
ನಿನಗಾಗಿ ರಾತ್ರಿಯಿಡಿ ಬರೆದೆ ನಾನು ..!! 

ನನ್ನೊಳಗಿನ ಕವಿತೆ ...
ನೀನ್ ಇಲ್ಲದಿಂದ್ದು ಸಾಯುತ್ತೆ ..
ನನ್ನೇಕೆ ನೀನು ಮರೆತೆ..
ಬೇರೆಲ್ಲಿ ಈ ಹೃದಯ ಸೇರುತ್ತೆ...!

ಕವಿತೆಯ ಪ್ರತಿ ಪುಟದಲ್ಲೂ ನಿನ್ನ ಪ್ರತಿಬಿಂದವೇ ...
ಒಡೆದಿರೋ ಗಾಜಲೂ ನಾ ನಿನ್ನನೇ ಕಾಣುವೇ..
ನಿನ್ನಯ ನೆನಪಲಿ ಈ ಮಳೆಯಲು ಬೆವರುವೇ...
ಆ ಬೆವರಿನ ಹನಿಯಲು ನಿನ್ನ ಮುಖವಾಡವೇ...! 

ನನ್ನೊಳಗಿನ ಕವಿತೆ ...
ನೀನ್ ಇಲ್ಲದಿಂದ್ದು ಸಾಯುತ್ತೆ ..

ಕಣ್ಣಿನ ಅಂಚಲಿ ನಾ ನಿನ್ನನೇ ನೆನೆಯುವೇ...
ನೆನಪಿನ ಪುಟದಲಿ ಬರೆಯ ಏಕಾಂತವೇ...
ಏಕಾಂತದ ಪ್ರತಿ ಕ್ಷಣದಲ್ಲೂ ನಿನ್ನನೇ ಬಯಸುವೇ ...
ಆ ಬಯಕೆಯ ಕನಸಲು ನಿನ್ನೆ ಕನವರಿಸುವೇ ...

ನನ್ನೊಳಗಿನ ಕವಿತೆ ...
ನೀನ್ ಇಲ್ಲದಿಂದ್ದು ಸಾಯುತ್ತೆ ..    
-AliEn!

Comments

Post a Comment

Popular posts from this blog

ಮೌನ : ಏಕಾಂತದ ಸಂಗಾತಿ :

ಮೌನ : ಏಕಾಂತದ ಸಂಗಾತಿ : ಹೆಣ್ ಹೆಸರ ರೂಪ ಧರಿಸಿ.. ನಿನಾದದ ಗೋಡೆ ಮರೆಗೆ ಅವಿತವಳು.. ಮಾತುಗಳು ಉಸಿರೆಳೆದಾಗ.. ಭಾವುಕತೆಗೆ ಮಾತಾದವಳು... ನನ್ನ ಉಸಿರಾದವಳು; ಮೌನ..!! ಕ್ಷಮಿಸಲಾಗದ ತಪ್ಪು ಮಾಡಿದ ನನಗೆ.. ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು.. ಭಾವನೆಗಳ ಕಾಲುವೆಯಲ್ಲಿ  ಅವಿತಿದ್ದಾಗ.. ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು.. ನನ್ನ ಉಸಿರಾದವಳು; ಮೌನ..!! ಮಾತು ಬಾರದ ಮುಗುಳ್ನಗೆಯೊಂದಿಗೆ.. ನಗುಮುಖವ ಧಾರೆಯೆರೆದು ಬೆಂಬಲಿಸಿದವಳು.. ನಡುರಾತ್ರಿ ಕಣ್ಣ ಬೆವರಲ್ಲಿ  ನಡುಗುತಿದ್ದಾಗ.. ತನ್ನ ಹಸ್ತ ನೀಡಿ ಸ್ವಾಗತಿಸಿದವಳು.. ನನ್ನ ಉಸಿರಾದವಳು; ಮೌನ..!! ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು, ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು, ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು ನನ್ನ ಉಸಿರಾದವಳು; ಮೌನ! ಕವಿದ ಕಲ್ಪನೆಗೆ ಹಣತೆಯಾಗಿ ಒಲವಿನ ಪುಟದ ಮರೆಗೆ ಕವಿತೆಯಾದವಳು ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು ನನ್ನ ಉಸಿರಾದವಳು; ಮೌನ! ಸೋಕದ ಮುತ್ತಿನ ಬಿಸಿಗೆ ಕರಗಿ ವಾಲದ ತೋಳಿನ ನಡುವೆ ಬಂದಿಯಾದವಳು ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು ನನ್ನ ಉಸಿರಾದವಳು; ಮೌನ!       ...

ಕಾಡಬೇಡ ಗೆಳತಿ

 ಹಗಲು ಇರುಳೆನ್ನದೆ ಕಾಡಿದೆಯನ್ನ ಕಿರುನಗೆ ಬೀರುತ ಮೋಹಿಸಿದೆಯನ್ನ ಕನಸ, ನನಸಾಗಿಸಿ ಆಲಂಗಿಸಿದೆಯನ್ನ ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!! ಎಂದು ಬರುವೆ...? ಈ ಕನಸ ಹೂವಾಗಿಸಿ,ನಲ್ಮೆಯ ರಸದೌತಣ ಉಣಬಡಿಸಲು ಕಾದಿರುವೆ ನಾನಿನ್ನ, ತುಂಬಿದ ಹೃದಯದಲ್ಲಿ ಭಾಂದವ್ಯದ ಭಾವ ತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!! ಅನುರಾಗದ ಅರಮನೆಯಲ್ಲಿ ಕಾದಿರುವೆ ನಿನಗಾಗಿ ಎದೆ ಕದವ ತೆರೆದು, ಈ ಜಗದ ದೊಂಬಿಯ ಮರೆತು ಹೃದಯ ತಾಳ ತಪ್ಪುತಿರುವುದು, ಮುತ್ತಿನ ಮಳೆ ಸುರಿಸುತ್ತ, ನಮ್ಮ ಪಾಲಿಗೆ ಇದು ಸ್ವರ್ಗವಾಗಿರುವುದು..!! ಅಂತರಂಗದಿ ಪುಟಿದೇಳುತಿದೆ ನಿನ್ನಯ ಚೆಲುವು ತುಂಬಿದ ಕಂಗಳ ನೆನೆದು, ಬಯಕೆ ಮೂಡಿಹುದು ಮನಸು ನಿನ್ನ ಸೇರಲು ಹಪಹಪಿಸುತ್ತಿರುವುದು, ನಿನ್ನ ಕಾಣುವ ಹಂಬಲದಿ ಕನಸುಗಳ ಹೆಣೆಯುತಿಹುದು..!! ಮನಕ್ಕೆ ಬೇಕಿಹುದು ನಿನ್ನ ತೋಳಬಲದ ಅಪ್ಪುಗೆ, ಕಳೆದು ಹೋಗುವೆ ಪ್ರೀತಿಯ ಬೇಡುತ ನಿನ್ನೊಪ್ಪಿಗೆ, ಎದೆಗೊರಗಿ ನಾನು ನಿದ್ರಿಸುವೆ ಮಗುವಾಗಿ, ಅಪ್ಪಿ ಮುದ್ದಿಸುವೆಯಾ ನೀ ಬೆಳದಿಂಗಳ ಚಂದಿರನಾಗಿ..!! "ಕಾಡಬೇಡ ಗೆಳತಿ ನೀನಿನ್ನೂ ದೂರ ನಿಂತು ಕಾಡಿಸಿದ್ದು ಸಾಕಿನ್ನೂ "