ಆದರ್ಶ ಶಿಕ್ಷಕ : "ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು. ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ..., ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6 ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ...