Skip to main content

Posts

Showing posts from August, 2019

ತಾಳ್ಮೆಯೇ ಸದ್ಗುಣ

ನಿಮ್ಮ ನಿರೀಕ್ಷಿತ ಸಮಯದಲ್ಲಿ ಕೆಲಸಗಳು ನಡೆಯದ ಕಾರಣ ಮುಂದುವರೆಯುವುದು ಬೇಡ ಎಂದು   ನೀವು ಯೋಚಿಸಿದೀರಾ ? ನಿಮ್ಮ ಕೆಲಸದಲ್ಲಿ ಬೆಳವಣಿಗೆಯನ್ನು ಕಾಣದ ಕಾರಣ ನೀವು ಏನು ಮಾಡುತ್ತಿದ್ದೀರಿ ಅದನ್ನು ಕೈಬಿಡಲು   ನಿರ್ಧರಿಸಿದೀರಾ ? ನಿಮ್ಮ ಕೆಲಸದಲ್ಲಿ ಅನುಭವಿಸಿದ ವೈಫಲ್ಯಗಳಿಂದಾಗಿ ನೀವು ಎಂದಾದರೂ ಆ ಕೆಲಸವನ್ನು   ಕೊನೆಗೊಳಿಸಬೇಕೆಂದು ತೀರ್ಮಾನಿಸಿದೀರಾ ? ಜೀವನದಲ್ಲಿ ಅನಿವಾರ್ಯವಾಗಿ ಕಂಡ ಏರಿಳಿತದ ಕಾರಣದಿಂದಾಗಿ ನೀವು ದುಃಖದಿಂದ , ಖಿನ್ನತೆಯಿಂದ ಮತ್ತು ನಕಾರಾತ್ಮಕ ಭಾವನೆಗಳಿಂದ ಮುಳುಗಿದಾಗ , ಮಾಡುತ್ತಿರುವ ಕೆಲಸವನ್ನು ಅರ್ಧದಲ್ಲಿ ಬಿಡಬೇಕೆಂದು ನೀವು ಭಾವಿಸಿದಾಗ , ಜೀವನವನ್ನು ಮುಂದುವರಿಸಲು ಒಂದು ಕಾರಣವನ್ನು ನೋಡಲು ನಿಮಗೆ ಸಾಧ್ಯವಾಗದಿದ್ದಾಗ , ನಿಮನ್ನು ನೀವು ಸರಳವಾದ ಮತ್ತು ಆಳವಾದ ಒಂದು ಸಾದೃಶ್ಯವೆಂದು ಭಾವಿಸಿಕೊಳ್ಳಿ. ಅದಕ್ಕಾಗಿ ಈ ಸಣ್ಣ ಅನುಭವವನ್ನು ಓದಿ: ಒಬ್ಬ ವ್ಯಕ್ತಿ ತನ್ನ ಹೊಲದಲ್ಲಿ ಜರೀಗಿಡ ಮತ್ತು ಬಿದಿರಿನ ಬೀಜಗಳನ್ನು ಬಿತ್ತಿದನು ಮತ್ತು ಅವುಗಳಿಗೆ   ಸಾಕಷ್ಟು ಬೆಳಕು ಮತ್ತು ನೀರು ಸಿಗುವಂತೆ ನೋಡಿಕೊಂಡರು.   ಜರೀಗಿಡವು ಭೂಮಿಯಿಂದ ಬೇಗನೆ ಮೊಳಕೆಯೊಡೆದು ಹೊರಹೊಮ್ಮಿ ಅದರ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಬಣ್ಣದಿಂದ ಆವರಿಸುವುದನ್ನು ನೋಡಿ ಅವನು ಸಂತೋಷಪಟ್ಟನು , ಆದರೆ ಬಿದಿರಿನ ನೋಟದಿಂದ ಏನೂ ಹೊರಬರದನ್ನು ನೋಡಿದಾಗ ಅವನು ನಿರಾಶೆಗೊಂಡನು , ಆದರೆ ...