Skip to main content

Posts

Showing posts from June, 2017

ಅಪರಿಚಿತೆ...!

ಅಪರಿಚಿತೆ...! ನಿನ್ನ ಕಣ್ಣ ಕಣ್ಮರೆಯಲ್ಲಿ ಕರಗಿ ನೀರಾಗುವ ಆಸೆಯೊಂದಿಗೆ, ಹಾತೊರೆಯುತಿದೆ ನನ್ನ ಕನಸುಗಳು ... ಕಣ್ಣ ಜೋಡಿ ಮಿಟುಕಿಸುವ ಮುನ್ನವೇ, ಕಣ್ಣ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು, ನಿನ್ನ ನೆನೆದು.. ನೆನಪಾದವು, ನೀ ನನ್ನ ಸಂತೈಸಿದ ಆ ಏಕಾಂತದ  ದಿನಗಳು, ಮುಗುಳ್ನಕ್ಕು; ಮೋಡ ಕರಗಿತು ಕಣ್ಣಂಚಿನಲ್ಲಿ... ಎಲ್ಲಿರುವೆ; ನನ್ನ ಹೃದಯದ ವೀಣೆಯ ತಂತಿಯ ಮೀಟಿದ, ಅಪರಿಚಿತೆ.. ಕಣ್ಣ ಮುಂದೆ ಬಂದು; ನನ್ನ ಕಣ್ಣ ಮಳೆಗೆ, ಕೊಡೆ ಹಿಡಿಯಲಾರೆಯ..? - AliEn!