Skip to main content

Posts

Showing posts from September, 2023

ಕಾಡಬೇಡ ಗೆಳತಿ

 ಹಗಲು ಇರುಳೆನ್ನದೆ ಕಾಡಿದೆಯನ್ನ ಕಿರುನಗೆ ಬೀರುತ ಮೋಹಿಸಿದೆಯನ್ನ ಕನಸ, ನನಸಾಗಿಸಿ ಆಲಂಗಿಸಿದೆಯನ್ನ ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!! ಎಂದು ಬರುವೆ...? ಈ ಕನಸ ಹೂವಾಗಿಸಿ,ನಲ್ಮೆಯ ರಸದೌತಣ ಉಣಬಡಿಸಲು ಕಾದಿರುವೆ ನಾನಿನ್ನ, ತುಂಬಿದ ಹೃದಯದಲ್ಲಿ ಭಾಂದವ್ಯದ ಭಾವ ತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!! ಅನುರಾಗದ ಅರಮನೆಯಲ್ಲಿ ಕಾದಿರುವೆ ನಿನಗಾಗಿ ಎದೆ ಕದವ ತೆರೆದು, ಈ ಜಗದ ದೊಂಬಿಯ ಮರೆತು ಹೃದಯ ತಾಳ ತಪ್ಪುತಿರುವುದು, ಮುತ್ತಿನ ಮಳೆ ಸುರಿಸುತ್ತ, ನಮ್ಮ ಪಾಲಿಗೆ ಇದು ಸ್ವರ್ಗವಾಗಿರುವುದು..!! ಅಂತರಂಗದಿ ಪುಟಿದೇಳುತಿದೆ ನಿನ್ನಯ ಚೆಲುವು ತುಂಬಿದ ಕಂಗಳ ನೆನೆದು, ಬಯಕೆ ಮೂಡಿಹುದು ಮನಸು ನಿನ್ನ ಸೇರಲು ಹಪಹಪಿಸುತ್ತಿರುವುದು, ನಿನ್ನ ಕಾಣುವ ಹಂಬಲದಿ ಕನಸುಗಳ ಹೆಣೆಯುತಿಹುದು..!! ಮನಕ್ಕೆ ಬೇಕಿಹುದು ನಿನ್ನ ತೋಳಬಲದ ಅಪ್ಪುಗೆ, ಕಳೆದು ಹೋಗುವೆ ಪ್ರೀತಿಯ ಬೇಡುತ ನಿನ್ನೊಪ್ಪಿಗೆ, ಎದೆಗೊರಗಿ ನಾನು ನಿದ್ರಿಸುವೆ ಮಗುವಾಗಿ, ಅಪ್ಪಿ ಮುದ್ದಿಸುವೆಯಾ ನೀ ಬೆಳದಿಂಗಳ ಚಂದಿರನಾಗಿ..!! "ಕಾಡಬೇಡ ಗೆಳತಿ ನೀನಿನ್ನೂ ದೂರ ನಿಂತು ಕಾಡಿಸಿದ್ದು ಸಾಕಿನ್ನೂ "