ದಯವಿಟ್ಟು ಅವಳಿಗೆ ಅಂಗವಿಕಲೆ ಪಟ್ಟ ಕಟ್ಟಬೇಡಿ ಅವಳಿಗೆ; ನೀನು ಸಬಲಳು ಎಂದು ಒಮ್ಮೆ ಹೇಳಿನೋಡಿ, ದಯವಿಟ್ಟು ಅವಳನ್ನು ಶೋಷಿಸುವ ಹಾಗೆ ನೋಡಬೇಡಿ ಅವಳನ್ನು ಯಾವತ್ತು ಹೀಯಾಳಿಸಬೇಡಿ. ನೀವು ಭಾವಿಸಬಹುದು, ಅವಳಿಗೆ ಬೇಕು ಸಹಾನುಭೂತಿ ಆದರೆ; ಅವಳಿಗೆ ಬೇಕಾಗಿರುವುದು ಬರಿ ಅನುಭೂತಿ, ನೋಡಿ ಅವಳನ್ನು ಅದೇ ಪೂರ್ಣ ಘನತೆಯಿಂದ ಅದೇ ಮಾನವೀಯತೆಯ ದೃಷ್ಟಿಯಿಂದ. ಯಾವಾಗಲೂ ಅವಳಿಗೆ ಒಂದು ಅವಕಾಶ ನೀಡಿ ಅವಳು ಶಕ್ತಳಲ್ಲ ಎಂದು ಯೋಚಿಸುವುದನ್ನು ಬಿಡಿ, ಅವಳಿಗೆ ಅದನ್ನು ಸ್ವಂತವಾಗಿ ಮಾಡಬಹುದಾದರೆ ಒಬ್ಬಳೇ ಮಾಡಲಿ ಬಿಡಿ, ನಿಮಗೇನು ತೊಂದರೆ. ನೀವು ಭೇಟಿಮಾಡುವಾಗ ಆಕೆಯನ್ನು; ಅಂತರಇರಿಸಬೇಡಿ ಆಕೆಯ ಅಂಗವಿಕಲತೆಯನ್ನು ಬಿಡಿ; ಆಕೆಗೆ ಪ್ರಾಮುಖ್ಯತೆ ಕೊಡಿ. ನಾವು ನೋಡದ ಒಂದು ಆತ್ಮ ಅವಳಲ್ಲಿ ಇದೆ, ಅವಳನ್ನು ಇತರ ಮಾನವರಂತೆ ನೋಡಿ! - AliEn!